 ಶ್ರೀ  ಹರೇ ಶ್ರೀನಿವಾಸ 
ರಚನೆ: ಶ್ರೀ ಕನಕದಾಸರು

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ  /ಪ/
ಬರಿದೆ ಮಾತೆಗಿನ್ನು ಅರಿತು ಪೆಳುವೆನಯ್ಯಾ /ಅ.ಪ/

ತಾಯಿ ತಂದೆಯ ಬಿಟ್ಟು  ತಪವಮಾಡಲು ಬಹುದು/
ದಾಯಾದಿ ಬಂಧುಗಳ ಬಿಡಲು ಬಹುದು/
ರಾಯಾ ತಾ ಮುನಿದರೆ ರಾಜ್ಯವನು ಬಿಡಬಹುದು/
ಕಾಯಜ ಪಿತ ನಿನ್ನ ಅಡಿಘಳಿಗೆ ಬಿಡಲಾಗದು

ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು/
ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು/
ಮಡದಿ ಮಕ್ಕಳನೆಲ್ಲ ಕಡೆಗೆ ತೊಲಗಿಸಿ ಬಿಡಬಹುದು/
ಕಡಲೋಡೆಯ ನಿನ್ನ ಅಡಿಯ ಬಿಡಲಾಗದು /೨/

ಪ್ರಾಣವಾ ಪರರು ಬೇಡಿದರೆ ಎತ್ತಿ ಕೊಡಬಹುದು/
ಮಾನದಲಿ ಮನವ ತಗ್ಗಿಸಲು ಬಹುದು/
ಪ್ರಾಣನಾಯಕನಾದ ಆದೀಕೇಶವರಾಯ/
ಜಾಣ ಶ್ರೀ ಕೃಷ್ಣಾ ನಿನ್ನಡಿಘಳಿಗೆ ಬಿಡಲಾಗದು /೩/
/ ಶ್ರೀ ಕೃಷ್ಣಾರ್ಪಣ /

Category:ಕನಕದಾಸ ಸಾಹಿತ್ಯ
Category:ದಾಸ ಸಾಹಿತ್ಯ